Montessori Way

Teach Kannada

Designed For teachers, parents and all those interested. Learn to teach Kannada to any age group in a fun, activity-based way and be a true part of their learning journey.

Introductory offer: 50% off for the first 50 admissions

Online 100%

access anytime and anywhere

Video lessons

Recorded classes and demos

Q & A Sessions

Live Question & Answer Time

Lifetime access

Forever course access

ಮಾಂತೆಸ್ಸೋರಿ ವಿಧಾನದಲ್ಲಿ

ಕನ್ನಡ ಕಲಿಸಿ.

ಶಿಕ್ಷಕರಿಗೆ, ಪೋಷಕರಿಗೆ ಮತ್ತು ಆಸಕ್ತಿಯುಳ್ಳವರಿಗೆ, ಚಟುವಟಿಕೆಗಳಿಂದ ರಸಮಯ ರೀತಿಯಲ್ಲಿ ಯಾವುದೇ ವಯಸ್ಸಿನವರಿಗೆ ಕನ್ನಡವನ್ನು ಕಲಿಸಿ, ಅವರ ಕಲಿಕೆಯ ಸಂತೋಷದಲ್ಲಿ ಭಾಗಿಗಳಾಗಿ.

50% ಆರಂಭಿಕ ರಿಯಾಯಿತಿ : ಮೊದಲ 50 ನೋಂದಣಿಗಳಿಗೆ

ಸಂಪೂರ್ಣ ಆನ್‌ಲೈನ್

ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ

ವೀಡಿಯೋ ಪಾಠಗಳು

ರೆಕಾರ್ಡ್ ಪಾಠಗಳು ಮತ್ತು ಚಟುವಟಿಕೆಗಳು

ಪ್ರಶ್ನೋತ್ತರ ಸಮಯ

ನಿಯಮಿತ ಪ್ರಶ್ನೋತ್ತರ ಅಧಿವೇಶನಗಳು

ಅಜೀವ ಪ್ರವೇಶ

ಜೀವನಪೂರ್ತಿ ಕೋರ್ಸ್ ಪ್ರವೇಶ

Program Fee & Details

50% ಆರಂಭಿಕ ರಿಯಾಯಿತಿ

₹0

₹1199

Free Plan

Limited Access

₹749

₹1499

Standard
Learning Plan

For Parents & Students

₹999

₹1999

Premium Plan

For Teachers & Schools

ಕನ್ನಡ ಕಲಿಸಿ – ಕೋರ್ಸ್ ಪಠ್ಯಕ್ರಮ

ಘಟಕ 1

ಮಗುವಿನ ಭಾಷಾ ಬೆಳವಣಿಗೆಯಲ್ಲಿ ಪೋಷಕರ ಪಾತ್ರ

ಈ ಘಟಕದಲ್ಲಿ ಭಾಷೆ ಎಂದರೆ ಏನು ಮತ್ತು ಮಗುವಿನ ಭಾಷಾ ಬೆಳವಣಿಗೆಯಲ್ಲಿ ಪೋಷಕರ ಮುಖ್ಯ ಪಾತ್ರವನ್ನು ತಿಳಿದುಕೊಳ್ಳುತ್ತೀರಿ. ಆರು ತಿಂಗಳಿನಿಂದಲೇ ಮನೆ, ಮಾರುಕಟ್ಟೆ, ಬೀದಿ, ದೇವಾಲಯ, ಮನೆಪನಿಗಳ ಸಂದರ್ಭಗಳಲ್ಲಿ ಮಾತನಾಡಿ ಪದಗಳನ್ನು ಪರಿಚಯಿಸುವ ಸರಳ ವಿಧಾನಗಳನ್ನು ಇಲ್ಲಿ ಕಲಿಯುತ್ತೀರಿ.

ಮಕ್ಕಳ ಮನೆಗಳಲ್ಲಿ ಮಗುವಿನ ಅನುಭವ ವೃದ್ಧಿಸುವುದು

ಈ ಘಟಕದಲ್ಲಿ ಮಕ್ಕಳ ಮನೆಯಲ್ಲಿ ದೈನಂದಿನ, ಇಂದ್ರಿಯ, ಭಾಷಾ ಮತ್ತು ಗಣಿತ ಚಟುವಟಿಕೆಗಳು ಹಾಗೂ ಹೊರಗಿನ ಅನುಭವಗಳ ಮೂಲಕ ಮಗುವಿನ ಲೋಕವನ್ನು ಹೇಗೆ ಸಮೃದ್ಧಗೊಳಿಸಬಹುದು ಎಂಬುದನ್ನು ನೋಡುತ್ತೇವೆ. ಪ್ರತಿಯೊಂದು ಅನುಭವಕ್ಕೆ ಸ್ಪಷ್ಟ ಹೆಸರನ್ನು ನೀಡುವ ಮೂಲಕ ಅವರ ಶಬ್ದಕೋಶ ಮತ್ತು ಭಾಷಾ ಚಿಂತನೆಯನ್ನು ಬೆಂಬಲಿಸುವ ವಿಧಾನವನ್ನು ಕಲಿಯುತ್ತೀರಿ

ಆಲಿಸುವಿಕೆಯ ಮೂಲಕ ಭಾಷಾ ಅಭಿವೃದ್ಧಿ

ಈ ಘಟಕದಲ್ಲಿ ‘ಕೆಳುವಿಕೆ’ ಮತ್ತು ‘ಆಲಿಸುವಿಕೆ’ಯ ನಡುವಿನ ವ್ಯತ್ಯಾಸವನ್ನು ಪರಿಚಯಿಸಿ, ಹಾಡುಗಳು, ಶಿಶು ಗೀತೆಗಳು, ನೈಜ ಜೀವನ ಕಥೆಗಳು, ಆಜ್ಞೆ ಆಟಗಳು ಮತ್ತು “ನಟಿಸೋ ನಟಿಸೋ ರಾಜಕುಮಾರ” ಮುಂತಾದ ಚಟುವಟಿಕೆಗಳ ಮೂಲಕ ಆಲಿಸುವಿಕೆ ಕೌಶಲ್ಯವನ್ನು ಹೇಗೆ ಬೆಳೆಸಬಹುದು ಎಂಬುದನ್ನು ಕಲಿಯುತ್ತೀರಿ.

ಮಾತನಾಡುವ ಕೌಶಲ್ಯದ ವೃದ್ಧಿ

ಈ ಘಟಕದಲ್ಲಿ ಮಾತನಾಡುವ ಸ್ವಾತಂತ್ರ್ಯ, ಸ್ಪಷ್ಟ ಉಚ್ಚಾರಣೆ, ಪದಗಳು–ಚುಟುಕುಗಳು, ಆಟಗಳು, ಚಿತ್ರಗಳು ಮತ್ತು ನೈಜ ಘಟನೆಗಳ ಮೂಲಕ ಮಕ್ಕಳಲ್ಲಿ ಮಾತನಾಡುವ ಧೈರ್ಯ, ಶಬ್ದಕೋಶ ಮತ್ತು ವಾಕ್ಯರಚನೆಯನ್ನು ಹೇಗೆ ಬೆಳೆಸಬಹುದು ಎಂಬುದನ್ನು ಕಲಿಯುತ್ತೀರಿ.

ಧ್ವನಿ ವಿಶ್ಲೇಷಣೆ

ಈ ಘಟಕದಲ್ಲಿ ವಸ್ತುಗಳ ಪೆಟ್ಟಿಗೆ ಮತ್ತು ಪದಗಳ ಸರಣಿಯಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪದಗಳಲ್ಲಿ ಇರುವ ಧ್ವನಿಗಳನ್ನು ಗುರುತಿಸುವ ಅಭ್ಯಾಸ ದೊರೆಯುತ್ತದೆ. ಧ್ವನಿಗಳ ಬಗ್ಗೆ ಈ ಜಾಗೃತಿಯಿಂದ ಮುಂದೆ ಓದು–ಬರಹಕ್ಕೆ ಅಗತ್ಯವಾದ ಭದ್ರ ಅಡಿಪಾಯ ನಿರ್ಮಾಣವಾಗುತ್ತದೆ

ಮರಳಾಕ್ಷರಗಳು (Sandpaper Letters)

ಈ ಘಟಕದಲ್ಲಿ ಮರಳಾಕ್ಷರಗಳ ಮೂಲಕ ಧ್ವನಿ–ಅಕ್ಷರಗಳ ಮೂರುಮಟ್ಟದ ಬಂಧವನ್ನು (ಕಣ್ಣು, ಕಿವಿ, ಸ್ಪರ್ಶ) ಹೇಗೆ ನಿರ್ಮಿಸಬಹುದು ಎಂಬುದನ್ನು ಕಲಿಯುತ್ತೀರಿ. ಧ್ವನಿ ವಿಶ್ಲೇಷಣೆಯ ನಂತರ ಯಾವ ಅಕ್ಷರಗಳನ್ನು ಯಾವ ಕ್ರಮದಲ್ಲಿ ಪರಿಚಯಿಸಬೇಕು ಮತ್ತು ಮರಳಾಕ್ಷರಗಳ ಸರಿಯಾದ ಪ್ರದರ್ಶನ ವಿಧಾನವನ್ನು ಇಲ್ಲಿ ಹಂತ–ಹಂತವಾಗಿ ನೋಡುತ್ತೇವೆ.

ಮೌಖಿಕ ಧ್ವನಿ ವಿಶ್ಲೇಷಣಾ ಚಟುವಟಿಕೆಗಳು

ಈ ಘಟಕದಲ್ಲಿ ‘ಸೌಂಡ್ ಗೇಮ್ಸ್’ ಮೂಲಕ ಮಕ್ಕಳಿಗೆ ಪದಗಳಲ್ಲಿರುವ ಧ್ವನಿಗಳನ್ನು ಗುರುತಿಸುವ ಮೌಖಿಕ ಧ್ವನಿ ವಿಶ್ಲೇಷಣೆಯ ಚಟುವಟಿಕೆಗಳನ್ನು ಕಲಿಯುತ್ತೀರಿ. ಈ ಸರಳ, ಆನಂದಕರ ಆಟಗಳು ಮುಂದೆ ಓದು–ಬರಹಕ್ಕೆ ಅಗತ್ಯವಾದ ಧ್ವನಿಯ ಅರಿವನ್ನು ಗಾಢಗೊಳಿಸುತ್ತವೆ.

ತಿದ್ದುವ ಅಕ್ಷರಗಳು (Tracing Letters)

ಈ ಘಟಕದಲ್ಲಿ ಮಾಂತೆಸ್ಸೋರಿಯೇತರ ಶಾಲೆಯ ಮಕ್ಕಳಿಗೆ ಬೇಕಾಗುವ ಹೆಚ್ಚಿನ ತರಬೇತಿಯನ್ನು ಹೇಗೆ ತಿದ್ದುವ ಅಕ್ಷರಗಳಿಂದ ಪಡೆಯಬಹುದು ಎಂಬುದನ್ನು ವಿವರಿಸಲಾಗಿದೆ. ತಿದ್ದುವ ಅಕ್ಷರಗಳನ್ನು ಹೇಗೆ ಪರಿಚಯಿಸುವ ವಿಧಾನವನ್ನು ಕಲಿಯುತ್ತೀರಿ. ಮರಳಾಕ್ಷರಗಳ ನಂತರದ ಈ ಹಂತವು ಮಕ್ಕಳ ಸೀಸದ ಕಡ್ಡಿ ಹಿಡಿತ , ಸ್ನಾಯು ಸ್ಮರಣೆ ಮತ್ತು ಸ್ವತಂತ್ರವಾಗಿ ಬರೆಯುವ ಸಿದ್ಧತೆಯನ್ನು ಗಾಢಗೊಳಿಸುತ್ತದೆ.

ಚಲಾಕ್ಷರಗಳ ಪರಿಚಯ (Moveable Alphabet)

ಈ ಘಟಕದಲ್ಲಿ ಮಗು ಯಾವಾಗ ಚಲಾಕ್ಷರಗಳಿಗೆ ಸಿದ್ಧವಾಗುತ್ತದೆ, ಚಲಾಕ್ಷರ ಪೆಟ್ಟಿಗೆಗಳನ್ನು ಹೇಗೆ ಪರಿಚಯಿಸಬೇಕು, ಮತ್ತು ಮಕ್ಕಳಿಗೆ ಪರಿಚಿತ ಧ್ವನಿಗಳಿರುವ ಪದಗಳನ್ನು ಆಯ್ಕೆ ಮಾಡಿ ಪದರಚನೆಗೆ ಹೇಗೆ ಮಾರ್ಗದರ್ಶನ ಕೊಡಬೇಕು ಎಂಬುದನ್ನು ಕಲಿಯುತ್ತೀರಿ.

ಮುದ್ರಿತ ಚಲಾಕ್ಷರಗಳು

ಈ ಘಟಕದಲ್ಲಿ ಮಾಂತೆಸ್ಸೋರಿ ಚಲಾಕ್ಷರ ಪೆಟ್ಟಿಗೆ ಲಭ್ಯವಿಲ್ಲದ ಶಾಲೆಗಳಲ್ಲಿ ಮುದ್ರಿತ ಅಕ್ಷರ ಕಾರ್ಡ್‌ಗಳನ್ನು ಬಳಸಿಕೊಂಡು ಚಲಾಕ್ಷರ ಪೆಟ್ಟಿಗೆಯನ್ನು ಹೇಗೆ ತಯಾರಿಸಬೇಕು ಎಂಬುದನ್ನು ಕಲಿಯುತ್ತೀರಿ. ಮರಳಾಕ್ಷರಗಳಿಗೆ ಪರಿಚಿತವಾದ ಮಕ್ಕಳಿಗೆ ಮುದ್ರಿತ ಚಲಾಕ್ಷರಗಳನ್ನು, ಚಲಾಕ್ಷರಗಳಂತೆಯೇ ಕ್ರಮಬದ್ಧವಾಗಿ ಪರಿಚಯಿಸಿ ಧ್ವನಿ–ಅಕ್ಷರ ಕೆಲಸವನ್ನು ಹೇಗೆ ಮುಂದುವರಿಸಬೇಕು ಎಂಬುದನ್ನೂ ಇಲ್ಲಿ ನೋಡುತ್ತೀರಿ

ಚಿತ್ರಮಾಲಿಕೆಗಳು

ಈ ಘಟಕದಲ್ಲಿ ಚಲಾಕ್ಷರಗಳೊಂದಿಗೆ ಕೆಲಸ ಮಾಡುವಾಗ ಪದಗಳಿಗಾಗಿ ಶಿಕ್ಷಕರ ಮೇಲೆ ಅವಲಂಬಿತರಾಗಿರುವ ಮಕ್ಕಳನ್ನು ಚಿತ್ರಮಾಲಿಕೆಗಳ ಮೂಲಕ ಸ್ವತಂತ್ರವಾಗಿ ಪದಗಳನ್ನು ಹುಡುಕುವವರಾಗಿ ಹೇಗೆ ರೂಪಿಸಬಹುದು ಎಂಬುದನ್ನು ಕಲಿಯುತ್ತೀರಿ. ಪ್ರತಿಹಂತಕ್ಕೆ ಸೂಕ್ತವಾದ ಚಿತ್ರ–ಕಾರ್ಡ್‌ಗಳನ್ನು ಆರಿಸಿ, ತಯಾರಿಸಿ, ಕ್ರಮಬದ್ಧವಾಗಿ ಬಳಸುವ ವಿಧಾನವೂ ಇಲ್ಲಿ ನೋಡುತ್ತೀರಿ.

ಏಕರೂಪ ಧ್ವನಿಯ ಅಕ್ಷರಗಳ ಗೊಂದಲ ನಿವಾರಣೆ

ಈ ಘಟಕದಲ್ಲಿ ಅ–ಆ, ಅ–ಹ, ನ–ಣ, ಲ–ಳ ಮುಂತಾದ ಒಂದೇ ತರಹ ಕೇಳುವ ಧ್ವನಿ–ಅಕ್ಷರಗಳ ನಡುವಿನ ಗೊಂದಲವನ್ನು ನಿವಾರಿಸಲು ಸಪ್ತ ಸಹಾಯಗಳ ರೂಪದಲ್ಲಿ ಏಳು ಕ್ರಮಬದ್ಧ ಚಟುವಟಿಕೆಗಳನ್ನು ಕಲಿಯುತ್ತೀರಿ. ವಿಶೇಷ ನಾಮಪಾಠ, ಧ್ವನಿ ಆಟಗಳು ಮತ್ತು ವಿಶೇಷ ಚಿತ್ರಮಾಲಿಕೆಗಳ ಮೂಲಕ ಮಕ್ಕಳು ಈ ಧ್ವನಿಗಳ ಸ್ಪಷ್ಟ ಭೇದವನ್ನು ಅರಿಯುವಂತೆ ಮಾರ್ಗದರ್ಶನವನ್ನು ಪಡೆಯುತ್ತೀರಿ

ಗುಣಿತಾಕ್ಷರಗಳು

ಈ ಘಟಕದಲ್ಲಿ ಐ ಮತ್ತು ಔ ಸಂಧ್ಯಕ್ಷರಗಳ ಪರಿಚಯದಿಂದ ಹಿಡಿದು, ಸ್ವರ–ವ್ಯಂಜನ ಸಂಯೋಜನೆಯಲ್ಲಿನ “ಗುಣಿತಾಕ್ಷರ” ನಿಯಮವನ್ನು ಮತ್ತು ಗುಣಿತಾಕ್ಷರ ಪಟ್ಟಗಳ ಮೂಲಕ ಗುಣಿತಾಕ್ಷರಗಳನ್ನು ಪರಿಚಯಿಸುವ ವಿಧಾನವನ್ನು ಕಲಿಯುತ್ತೀರಿ. ಹಲವಾರು ಆಟಗಳು ಮತ್ತು ಅಭ್ಯಾಸ ಚಟುವಟಿಕೆಗಳ ಮೂಲಕ ಮಕ್ಕಳು ಗುಣಿತಾಕ್ಷರಗಳ ರೂಪ ಮತ್ತು ಧ್ವನಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಮಾರ್ಗದರ್ಶನ ಪಡೆಯುತ್ತಾರೆ.

ಚಲಾಕ್ಷರ ಇಲ್ಲದೆ ಗುಣಿತಾಕ್ಷರಗಳ ಪರಿಚಯ

ಈ ಘಟಕದಲ್ಲಿ ಚಲಾಕ್ಷರ ಪೆಟ್ಟಿಗೆ ಇಲ್ಲದ ಶಾಲೆಗಳಲ್ಲಿ ಮುದ್ರಿತ ಚಲಾಕ್ಷರ ಪೆಟ್ಟಿಗೆ ಮತ್ತು ಗುಣಿತಾಕ್ಷರ ಪಟದ ಸಹಾಯದಿಂದ ಗುಣಿತಾಕ್ಷರಗಳನ್ನು ಹೇಗೆ ಪರಿಚಯಿಸಬೇಕು ಎಂಬುದನ್ನು ಕಲಿಯುತ್ತೀರಿ. “ನರಿ” ಎಂಬ ಪದದ ಉದಾಹರಣೆಯಿಂದ ಸ್ವರ–ವ್ಯಂಜನ ಸಂಯೋಜನೆ, ಹಲಂತ್ ಬದಲಿಗೆ ಗುಣಿತಾಕ್ಷರ ಬರೆಯುವ ಕ್ರಮವನ್ನು ಹಂತ ಹಂತವಾಗಿ ವಿವರಿಸಲಾಗಿದೆ.

ಸಂಯುಕ್ತಾಕ್ಷರಗಳ ಪರಿಚಯ

ಈ ಘಟಕದಲ್ಲಿ ಟ್, ಡ್, ಣ್, ಚ್, ಜ್, ಶ್ ಮುಂತಾದ ಧ್ವನಿಗಳ ಪರಿಚಯಕ್ಕೆ ಸಮಾನಾಂತರವಾಗಿ ಸಂಯುಕ್ತಾಕ್ಷರಗಳನ್ನು ಹೇಗೆ ಪರಿಚಯಿಸುವುದೆಂದು ಅರಿಯುವಿರಿ. ಚಲಾಕ್ಷರ ಪೆಟ್ಟಿಗೆ, ಸಂಯುಕ್ತಾಕ್ಷರ ಪಟ ಮತ್ತು ಚಿತ್ರಮಾಲಿಕೆಗಳ ಸಹಾಯದಿಂದ ಮಕ್ಕಳಿಗೆ ಸಂಯುಕ್ತಾಕ್ಷರ ಪದಗಳನ್ನು ಓದಿ–ಬರೆಯುವ ಅನುಭವ ನೀಡುವ ವಿಧಾನವನ್ನು ಇಲ್ಲಿ ನೋಡುತ್ತೀರಿ.

ಒತ್ತಕ್ಷರಗಳ ಪರಿಚಯ

ಈ ಘಟಕದಲ್ಲಿ ಉಳಿದ ವ್ಯಂಜನಗಳ ಪರಿಚಯದೊಂದಿಗೆ ಸಮಾನಾಂತರವಾಗಿ ಒತ್ತಕ್ಷರಗಳನ್ನು ಹೇಗೆ ಪರಿಚಯಿಸಬೇಕು ಎಂಬುದನ್ನು ಕಲಿಯುತ್ತೀರಿ. ಅಕ–ಅಕ್ಕ, ಅಮ–ಅಮ್ಮ ಮುಂತಾದ ಪದಜೋಡಿಗಳ ಮೂಲಕ “ಒತ್ತಿ ಹೇಳುವ” ಧ್ವನಿಯನ್ನು ಮಕ್ಕಳು ಗುರುತಿಸಿ, ಒತ್ತಕ್ಷರ ಪಟದ ಸಹಾಯದಿಂದ ಸರಿಯಾಗಿ ಬರೆಯುವ ವಿಧಾನವನ್ನು ಹಂತ ಹಂತವಾಗಿ ತಿಳಿದುಕೊಳ್ಳುತ್ತೀರಿ.

ಅನುನಾಸಿಕದ ಪರಿಚಯ

ಈ ಘಟಕದಲ್ಲಿ ಙ್, ಞ್, ಣ್, ನ್, ಮ್ ಎಂಬ ಐದು ಅನುನಾಸಿಕ ಧ್ವನಿಗಳನ್ನು ಮಕ್ಕಳಿಗೆ ಹೇಗೆ ಪರಿಚಯಿಸಬೇಕು ಮತ್ತು ಸಂಯುಕ್ತಾಕ್ಷರಗಳಲ್ಲಿ ಅನುನಾಸಿಕ ಬಂದಾಗ ಸೊನ್ನೆ( ಂ) ಬಳಸಿ ಸರಿಯಾಗಿ ಬರೆಯುವ ವಿಧಾನವನ್ನು ಗಂಟೆ, ಬಿಂದಿಗೆ ಇತ್ಯಾದಿ ಪದಗಳ ಉದಾಹರಣೆಗಳೊಂದಿಗೆ ಕಲಿಯುತ್ತೀರಿ.

ಅರ್ಕಾವತ್ತಿನ ಪರಿಚಯ

ಈ ಘಟಕದಲ್ಲಿ ಸಂಯುಕ್ತಾಕ್ಷರದಲ್ಲಿ ಮೊದಲ ವ್ಯಂಜನ ‘ರ್’ ಆಗಿರುವಾಗ ಅರ್ಕಾವತ್ತು ಬಳಸುವ ನಿಯಮವನ್ನು ಸೂರ್ಯ, ಸರ್ಪ ಮುಂತಾದ ಪದಗಳು ಮತ್ತು ಚಿತ್ರಮಾಲಿಕೆಗಳ ಉದಾಹರಣೆಗಳ ಮೂಲಕ ಕಲಿಯುತ್ತೀರಿ. ಮಕ್ಕಳಿಗೆ ರ್ + ಮತ್ತೊಂದು ವ್ಯಂಜನ ಸಂಯೋಗವನ್ನು ಸ್ಪಷ್ಟವಾಗಿ ಗುರುತಿಸಿ, ಸರಿಯಾದ ಅರ್ಕಾವತ್ತು ರೂಪದಲ್ಲಿ ಬರೆಯುವ ಅಭ್ಯಾಸ ದೊರೆಯುತ್ತದೆ.

Other Courses

Scroll to Top